FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, October 5, 2016

Organising Committee Formation


2016-17 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಂಸ್ಕ್ರತೋತ್ಸವ ಹಾಗು ಅರೇಬಿಕ್ ಸಾಹಿತ್ಯೋತ್ಸವದ  ಓರ್ಗನೈಸಿಂಗ್  ಸಮಿತಿ ಹಾಗು ವಿವಿಧ ಉಪ ಸಮಿತಿಗಳ ರೂಪಿಕರಣದ ಸಭೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2.30 ಕ್ಕೆ ಸರಿಯಾಗಿ ಆರಂಭವಾಯಿತು. ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ವೆಲ್ಫೇರ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಚನಿಯ ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಪಿ. ಟಿ. ಎ . ಅಧ್ಯಕ್ಷ  ಸುಂದರ ಶೆಟ್ಟಿ , ಎ. ಯು.ಪಿ.ಶಾಲೆ ಧರ್ಮತ್ತಡ್ಕದ ಪಿ.ಟಿ. ಎ.  ಅಧ್ಯಕ್ಷ ಶ್ರೀ ಜಾನ್ ಡಿ ಸೋಜ , ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯ ಫೋರಮ್  ಕಾರ್ಯದರ್ಶಿ ಶ್ರೀ ಟಿ.ಡಿ. ಸದಾಶಿವ ರಾವ್ , ದುರ್ಗಾಪರಮೇಶ್ವರಿ ಹೈಸ್ಕೂಲಿನ ಮೆನೇಜರ್ ಶಂಕರನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಪುತ್ತಿಗೆ ಪಂಚಾಯತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾಂತಿ , ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ವಸಂತಿ ,  ಧರ್ಮತ್ತಡ್ಕ ಯು.ಪಿ. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಚಳ್ಳಂಗಾಯಮ್ ಶಾಲಾ ಮೆನೇಜರ್ ಶ್ರೀ ಸಿ. ಎ .ಅಬ್ದುಲ್ಲಾ ಉಪಸ್ಥಿತರಿದ್ದರು. ಸಭೆಯಲ್ಲಿ  ಕಲೋತ್ಸವದ ಜನರಲ್ ಕನ್ವಿನರ್ ಆಗಿ SDPHSS Dharmathadka ದ  Pricipal  ಶ್ರೀ ರಾಮಚಂದ್ರ ಭಟ್ ಹಾಗು  ಧರ್ಮತ್ತಡ್ಕ ಯು.ಪಿ. ಶಾಲಾ ಮುಖ್ಯೋಪಾಧ್ಯಾಯ ಶ್ರೀ  ಯನ್ .ಮಹಾಲಿಂಗ ಭಟ್  ಅವರನ್ನು ಜಾಯಿಂಟ್ ಕನ್ವಿನರ್ ಆಗಿ ಆರಿಸಲಾಯಿತು. ನವೆಂಬರ್ ತಿಂಗಳಿನ 26,28,29  ಮತ್ತು 30 ರಂದು ಉಪಜಿಲ್ಲಾ ಕಲೋತ್ಸವವನ್ನು ನಡೆಸುವುದೆಂದು ನಿಶ್ಚಯಿಸಲಾಯಿತು. ಕಲೋತ್ಸವದ ಯಶಸ್ಸಿಗಾಗಿ  ಸಂಘಾಟಕ ಸಮಿತಿ ಹಾಗು ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು. ಕಲೋತ್ಸವದ ಜನರಲ್ ಕನ್ವಿನರ್ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿದರು. ಜಾಯಿಂಟ್ ಕನ್ವಿನರ್ ಯನ್ . ಮಹಾಲಿಂಗ ಭಟ್ ವಂದಿಸಿದರು. ಧರ್ಮತ್ತಡ್ಕ ಹೈಸ್ಕೂಲಿನ ಅಧ್ಯಾಪಕ ಸತೀಶ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

No comments:

Post a Comment