ಸಾಕ್ಷರ 2014 -ವಿಶೇಷ ತರಬೇತಿ ಕಾರ್ಯಕ್ರಮ ದ ಉದ್ಘಾಟನೆಯ ವರದಿ
ಧರ್ಮತ್ತಡ್ಕ ಎ ಯು ಪಿ ಶಾಲೆಯಲ್ಲಿ ಸಾಕ್ಷರ 2014 -ವಿಶೇಷ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ದಿ .06.08.2014 ರಂದು ಅಪರಾಹ್ನ 3.00ಗಂಟೆಗೆ ಸರಿಯಾಗಿ ಪಿ ಟಿ ಎ ಅಧ್ಯಕ್ಷರಾದ ವೆಂಕಟ್ರಾಜ ನೀರಮೂಲೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು . ಶಾಲಾ ವ್ಯವಸ್ಥಾಪಕರಾದ ಶ್ರೀ ಯನ್ ಸುಬ್ಬಣ್ಣ ಭಟ್ಟರು ಕಾರ್ಯಕ್ರಮವನ್ನು ಔ ಪಚಾರಿಕವಾಗಿ ಉದ್ಘಾಟಿಸಿದರು . ವಾರ್ಡ್ ಸದಸ್ಯೆ ವಸಂತಿ ಮೇಪೋಡು ಅವರು ಶುಭಾಶಂಸನೆ ಮಾಡಿದರು . ಶಾಲಾ ಮುಖ್ಯೋಪಾಧ್ಯಾಯರಾದ ಯನ್ ಯಚ್ ಲಕ್ಸ್ಮಿನಾರಾಯಣ ಭಟ್ಟರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು . ಅಧ್ಯಾಪಕರಾದ ಯನ್ ಮಹಾಲಿಂಗ ಭಟ್ಟರು ಧನ್ಯವಾದ ಸಮರ್ಪಿಸಿದರು . SRG ಕನ್ವೀನರ್ ಯನ್ ಶಂಕರನಾರಾಯಣ ಭಟ್ಟರು ಕಾರ್ಯಕ್ರಮ ನಿರೂಪಿಸಿದರು . ಬಳಿಕ 5 ಬ್ಯಾಚ್ ಗಳಲ್ಲಾಗಿ ಒಂದನೇ ದಿನದ ತರಗತಿ ನಡೆಯಿತು .
No comments:
Post a Comment