FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, August 15, 2014

Independance day celeberation

ನಮ್ಮ ದೇಶದ 68ನೆ ಸ್ವಾತಂತ್ರ್ಯ ದಿನವನ್ನು ನಮ್ಮ ಶಾಲೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.  ಮಕ್ಕಳ ಆಕರ್ಷಕ ಪ್ರಭಾತ ಫೇರಿಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೈದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಶಾಲಾ ಪಿ.ಟಿ.ಎ. ಅಧ್ಯಕ್ಷ ವೆಂಕಟರಾಜ ನೀರಮೂಲೆ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಬಂಧಕ ಶ್ರೀ ಎನ್.ಸುಬ್ಬಣ್ಣ ಭಟ್ ಶುಭಾಶಂಸನೆಗೈದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಸಹಾಯಕ ಅಧ್ಯಾಪಕ ಶ್ರೀ ಎನ್.ಶಂಕರನಾರಾಯಣ  ಭಟ್  ದಿನದ ಮಹತ್ವದ ಕುರಿತು ಮಾತನಾಡಿದರು. ಅನಂತರ ಮಕ್ಕಳಿಂದ ದೇಶಭಕ್ತಿಗೀತೆ, ಭಾಷಣ, ಸ್ಕಿಟ್ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರಿಯ ಅಧ್ಯಾಪಿಕೆ ಶ್ರೀಮತಿ ರೇವತಿ ಟೀಚರ್ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಸಹಾಯಕ ಅಧ್ಯಾಪಕ ಮಹಾಲಿಂಗ ಭಟ್ಟರು ವಂದಿಸಿದರು . ಕ್ರಷ್ಣಪ್ರಸಾದ ಮಾಸ್ಟರು  ಕಾರ್ಯಕ್ರಮ ನಿರೂಪಿಸಿದರು. ಮೊಗೇರ ಸಂಘ ಕಕ್ವೆ ಘಟಕದವರು ಸಿಹಿತಿಂಡಿಯನ್ನು ಒದಗಿಸಿದರು. 
ಕ್ಕಳು  ಹಾಗೂ ಅಧ್ಯಾಪಕರಿಂದ ಪ್ರಭಾತ ಫೇರಿ

 ಪ್ರಭಾತಫೇರಿ
 ಪ್ರಭಾತಫೇರಿ



ಶಾಲಾ ಮುಖ್ಯೋಪಾಧ್ಯಾಯರಿಂದ ಧ್ವಜಾರೋಹಣ
 ರೇವತಿ ಟೀಚರ್  ಇವರಿಂದ ಸ್ವಾಗತ ಭಾಷಣ
 ಪಿ.ಟಿ.ಎ. ಅಧ್ಯಕ್ಷ ವೆಂಕಟರಾಜ ನೀರಮೂಲೆ ಇವರಿಂದ  ಉದ್ಘಾಟನೆ
 ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಪುಟಾಣಿ ಮಕ್ಕಳು
 ಶಾಲಾ ಪ್ರಬಂಧಕರಿಂದ ಶುಭಾಶಂಸನೆ
 ಬಹುಮಾನ ವಿತರಣೆ


 ಮೂರನೆ ತರಗತಿ ಮಕ್ಕಳಿಂದ ದೇಶಭಕ್ತಿಗೀತೆ
 ಒಂದನೇ ಪುಟಾಣಿಗಳಿಂದ ದೇಶಭಕ್ತಿಗೀತೆ
 VII A ಮಕ್ಕಳಿಂದ ದೇಶಭಕ್ತಿಗೀತೆ
 V B ಮಕ್ಕಳಿಂದ ದೇಶಭಕ್ತಿಗೀತೆ
 VII A ಹುಡುಗಿಯರ ಸ್ಕಿಟ್
 ಅಪೂರ್ವಳಿಂದ ಭಾಷಣ
 VI C ಮಕ್ಕಳಿಂದ ದೇಶಭಕ್ತಿಗೀತೆ
 ಸಾತ್ವಿಕ್ ನೀರಮೂಲೆ ಇವನಿಂದ ಭಾಷಣ
 V A ಮಕ್ಕಳಿಂದ ದೇಶಭಕ್ತಿಗೀತೆ
ಆದಿತ್ಯನಿಂದ  ಭಾಷಣ
 VII C ಮಕ್ಕಳಿಂದ ದೇಶಭಕ್ತಿಗೀತೆ
 ಶಾರದಾ ಸುರಭಿಯಿಂದ ಭಾಷಣ

IV ನೇ ತರಗತಿ ಮಕ್ಕಳಿಂದ ದೇಶಭಕ್ತಿಗೀತೆ
ಸಾತ್ವಿಕ್ ಕ್ರಷ್ಣ ನಿಂದ ಭಾಷಣ

No comments:

Post a Comment