FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, July 11, 2015

WORLD POPULATION DAY

ವಿಶ್ವ ಜನಸಂಖ್ಯಾ ದಿನ 
ಪ್ರತಿ ವರ್ಷ ಜುಲೈ 11 ರಂದು ಪ್ರಪಂಚದಾದ್ಯಂತ ವಿಶ್ವ ಜನ ಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. 
  ಏರುತ್ತಿರುವ ಜನಸಂಖ್ಯೆಯಿಂದಾಗಿ ಉಂಟಾಗುವ  ಜಾಗತಿಕ ತೊಂದರೆ , ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗ್ರತಿ  ಮೂಡಿಸುವ ಸಲುವಾಗಿ ಈ ಆಚರಣೆಯನ್ನು 1989 ಜುಲೈ 11 ರಂದು ಜಾರಿಗೆ ತರಲಾಯಿತು. ಕ್ಷಣ ಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹು ದೊಡ್ಡ ಸಮಸ್ಯೆಯಾಗಿದೆ. ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತಿದಿನ 3,53,000 ಶಿಶುಗಳು ಜನಿಸುತ್ತವೆ.  ಕ್ಷಣ ಕ್ಷಣಕ್ಕೂ ಏರುತ್ತಿರುವ  ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ , ನೀರು, ವಸತಿ, ವಿದ್ಯಾಭ್ಯಾಸ, ಮೊದಲಾದ ಆವಶ್ಯಕತೆಗಳನ್ನು ಪೂರೈಸುವುದು ಕಷ್ಟವಾಗಿ ಈ ಭೂಮಿಯಲ್ಲಿ ಜೀವಿಸುವುದೇ ಅಸಾಧ್ಯವಾಗಬಹುದು. 1987 JULY 11 ರಂದು ವಿಶ್ವದ ಜನಸಂಖ್ಯೆ  ಅಧಿಕ್ರತವಾಗಿ 500 ಕೋಟಿ ತಲುಪಿತು. 2014 ಜನವರಿ 1 ರ ಅಂಕಿ ಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ ಸುಮಾರು 713 ಕೋಟಿ . 2015 ಜನವರಿ 1 ರ ಜನಗಣತಿಯಂತೆ ಇದು 714 ಕೋಟಿ . ವಿಶ್ವ ಜನಸಂಖ್ಯೆಯಲ್ಲಿ ಚೀನಾ ಆಗ್ರಾ ಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. ವಿಶ್ವ ಜನಸಂಖ್ಯೆಯಲ್ಲಿ ಶೇಕಡ 60 ರಷ್ಟು ಮಂದಿ ಏಶ್ಯಾ ಖಂಡದಲ್ಲಿ ವಾಸಿಸುವವರಾಗಿದ್ದಾರೆ. ಭಾರತದ ಜನಸಂಖ್ಯೆ 2015 ಜುಲೈ ತಿಂಗಳಿನ ಆಧಾರದಲ್ಲಿ 127 ಕೋಟಿ ತಲುಪಿದೆ. ಇದೇ ವೇಗದಲ್ಲಿ ಮುನ್ನಡೆದರೆ ಮುಂದೊಂದು ದಿನ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನವನ್ನು ಪಡೆಯಬಹುದು. ಜನಸಂಖ್ಯೆಯ ಹೆಚ್ಚಳದಿಂದ ಉಂಟಾಗುವ ತೊಂದರೆಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಬೇಕಾದುದು ಅತೀ ಅಗತ್ಯ. 

No comments:

Post a Comment