FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, July 30, 2015

PTA General Body Meet

ಪಿ.ಟಿ.ಎ. ಮಹಾ ಸಭೆ 
ನಮ್ಮ ಶಾಲೆಯ ಪಿ.ಟಿ.ಎ. ಮಹಾ ಸಭೆಯು ದಿನಾಂಕ 30.07.2015 ನೆ ಗುರುವಾರ ಅಪರಾಹ್ನ 2.30 ಕ್ಕೆ ಆರಂಭವಾಯಿತು . ನಮ್ಮನ್ನು ಬಿಟ್ಟಗಲಿದ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಡಾ ಎ.ಪಿ. ಜೆ. ಅಬ್ದುಲ್ ಕಲಾಮ್ ಹಾಗೂ ಶಾಲಾ ಪ್ರಬಂಧಕ ಶ್ರೀ ನೇರೋಳು ನಿಡುವಜೆ ಸುಬ್ಬಣ್ಣ ಭಟ್ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಹಿರಿಯ ಅಧ್ಯಾಪಿಕೆ ಶ್ರೀಮತಿ ರೇವತಿ ಟೀಚರ್ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಯುತ ವೆಂಕಟರಾಜ ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್. ಮಹಾಲಿಂಗ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ಗತವರ್ಷದ ವರದಿಯನ್ನು ವಾಚಿಸಿದರು . ಕಳೆದ ವರ್ಷ ಮಾರ್ಚಿ ತಿಂಗಳಿನಲ್ಲಿ ಜರಗಿದ ಯು. ಎಸ್. ಎಸ್. ಪರೀಕ್ಷೆಯಲ್ಲಿ ಮಂಜೇಶ್ವರ ಉಪಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದೊಂದಿಗೆ ತೇರ್ಗಡೆ ಹೊಂದಿ ಶಾಲೆಗೂ ಊರಿಗೂ ಕೀರ್ತಿ ತಂದು ಕೊಟ್ಟ  ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳಾದ ಪ್ರಣವ ಕುಮಾರ್  ನೇರೋಳು ಮತ್ತು ಆದಿತ್ಯ ಇ.ಎಚ್. ಇವರನ್ನು ಪಿ.ಟಿ. ಎ. ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು . ಕಾಸರಗೋಡು ಜೀವ ವಿಮಾ ನಿಗಮದ ಡೆವಲಪ್ ಮೆಂಟ್ ಆಫೀಸರ್ ಶ್ರೀ ಗಣೇಶ್ ಪ್ರಭು ಅವರು  ಸಭೆಗೆ ಆಗಮಿಸಿ ಭೀಮಾ ಸ್ಕೂಲ್ ನ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು. ಶ್ರೀ ಕ್ರಷ್ಣ ಪ್ರಸಾದ್ ಮಾಸ್ಟರ್ ಅವರು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರೊಂದಿಗೆ ಮುಕ್ತ ಸಂವಾದ ನಡೆಸಿದರು. 2015 -16  ನೆ ಶೈಕ್ಷಣಿಕ ವರ್ಷಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು. ಶ್ರೀಯುತ ಜೋನ್ ಡಿ ಸೋಜ ಧರ್ಮತ್ತಡ್ಕ ಅವರು ನೂತನ ಪಿ.ಟಿ. ಎ. ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಸತ್ಯನಾರಾಯಣ ಭಟ್ ಕನಿಯಾಲ ಅವರು ಎರಡನೆ ಅವಧಿಗೆ ಆರಿಸಲ್ಪಟ್ಟರು. ಇತರ 15 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು. ಇದೇ ಸಂದರ್ಭದಲ್ಲಿ ಮಾತ್ರ ಮಂಡಳಿಯ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಶ್ರೀಮತಿ ಶ್ರೀದೇವಿ ಪೂಕಳ  ಸಭಿಕರ ಸಹಮತದೊಂದಿಗೆ ಪುನರಾಯ್ಕೆಗೊಂಡರು. ವಸಂತಿ  ಅವರು ಉಪಾಧ್ಯಕ್ಷೆಯಾಗಿಯೂ ಇತರ 15 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಹಾಗೂ ಮಾತ್ರ ಮಂಡಳಿ ಅಧ್ಯಕ್ಷೆ ಶ್ರೀದೇವಿ ಪೂಕಳ ಅವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಸಹಾಯಕ ಅಧ್ಯಾಪಕ ಶ್ರೀ ಶಂಕರನಾರಾಯಣ ಭಟ್ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಶಾಲಾ ಅಧ್ಯಾಪಕ ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು. 
ಬಂದ ಅತಿಥಿಗಳನ್ನು ಸ್ವಾಗತಿಸುತ್ತಿರುವ ಶ್ರೀಮತಿ ರೇವತಿ ಟೀಚರ್
ಗತವರ್ಷದ ವರದಿಯನ್ನು ವಾಚಿಸುತ್ತಿರುವ ಶ್ರೀಯುತ ರಾಮಮೋಹನ ಮಾಸ್ಟರ್



                                ಮುಖ್ಯೋಪಾಧ್ಯಾಯರಿಂದ  ಪ್ರಾಸ್ತಾವಿಕ ನುಡಿಗಳು 
 USS ಪರೀಕ್ಷೆಯಲ್ಲಿ ಉಪಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರಣವ ಕುಮಾರ್ ಸ್ಮರಣಿಕೆ ಸ್ವೀಕರಿಸುತ್ತಿದ್ದಾನೆ

  USS ಪರೀಕ್ಷೆಯಲ್ಲಿ ಉಪಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಆದಿತ್ಯ ಇ. ಎಚ್. ಸ್ಮರಣಿಕೆ ಸ್ವೀಕರಿಸುತ್ತಿದ್ದಾನೆ
ಬೀಮಾ ಸ್ಕೂಲ್ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುವ ಶ್ರೀ ಗಣೇಶ್ ಪ್ರಭು

  ಕಾರ್ಯಕ್ರಮಕ್ಕೆ ಶುಭವನ್ನು ಕೋರುತ್ತಿರುವ ಶಾಲಾ ಮೇನೇಜರ್ ವಿಜಯಶ್ರೀ ಬಿ. 
 ಮಾತ್ರ ಮಂಡಳಿ ಅಧ್ಯಕ್ಷೆಯಿಂದ ಶುಭ ಹಾರೈಕೆಗಳು 
ಶಂಕರನಾರಾಯಣ ಭಟ್ ಅವರಿಂದ ವಂದನಾರ್ಪಣೆ


No comments:

Post a Comment