ಶಾಲಾ ಅಸೆಂಬ್ಲಿಯಲ್ಲಿ ಧರ್ಮತ್ತಡ್ಕ ಕುಟುಂಬ ಕಲ್ಯಾಣ ಕೇಂದ್ರದ ನರ್ಸ್ ಶ್ರೀಮತಿ ಲಕ್ಷ್ಮೀದೇವಿ ಅವರು ಕೈ ತೊಳೆಯುವುದರ ಅಗತ್ಯ , ತೊಳೆಯದೆ ಇರುವುದರಿಂದ ಆಗುವ ತೊಂದರೆಗಳು ಮತ್ತು ಕೈ ತೊಳೆಯುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಟ್ಟರು.
ಅನಂತರ ಎಲ್ಲ ತರಗತಿಯ ಮಕ್ಕಳೂ ಅವರು ಹೇಳಿಕೊಟ್ಟ ರೀತಿಯಲ್ಲಿ ಸಾಬೂನು ಉಪಯೋಗಿಸಿ ಕೈತೊಳೆದು ಸ್ವಚ್ಚಗೊಳಿಸಿದರು.
ಬಳಿಕ ಎಲ್ಲಾ ಮಕ್ಕಳು ಶಾಲಾ ಮೈದಾನದಲ್ಲಿ ಕೈಗಳನ್ನು ಎತ್ತಿ ಹಿಡಿದು ಜೋಡಿಸಿ" ಶುಚಿತ್ವ ಅಭ್ಯಾಸವು ನನ್ನ ಗುರಿಯಾಗಿದೆ. ಈ ಗುರಿಯನ್ನು ತಲುಪಲು ಆಹಾರ ಸೇವನೆಯ ಮೊದಲು ಹಾಗೂ ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸಾಬೂನು ಬಳಸಿ ಶುಚಿಗೊಳಿಸುವೆನು" ಎಂದು ಪ್ರತಿಜ್ಞೆಗೈದರು.
No comments:
Post a Comment