ನವರಾತ್ರಿ ಉತ್ಸವದ ಭಾಗವಾಗಿ ನಮ್ಮ ಶಾಲೆಯಲ್ಲಿ ದಿನಾಂಕ 21.10.2015 ರಂದು ಪುಸ್ತಕ ಪೂಜೆ ನಡೆಯಿತು. ಎಲ್ಲ ಮಕ್ಕಳ ಪುಸ್ತಕಗಳನ್ನಿಟ್ಟು ಮಕ್ಕಳು ಹಾಗೂ ಅಧ್ಯಾಪಕರು ಸೇರಿ ಭಜನೆ ಮಾಡಿದರು. ನೆರಿಯ ಶಿವಪ್ರಸಾದ್ ಭಟ್ ಅವರು ಪುಸ್ತಕ ಪೂಜೆಯನ್ನು ನೆರವೇರಿಸಿದರು. ಬಳಿಕ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ದಿನದ ಮಹತ್ವದ ಕುರಿತು ಸಂಸ್ಕ್ರತ ಅಧ್ಯಾಪಕರಾದ ಕ್ರಷ್ಣಪ್ರಸಾದ್ ಮಾಸ್ಟರ್ ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಸೇರಿದ ರಕ್ಷಕರಿಗೂ ಪ್ರಸಾದವನ್ನು ವಿತರಿಸಲಾಯಿತು. ರಕ್ಷಕರು ತೆಂಗಿನಕಾಯಿ, ಬಾಳೆ ಎಲೆ ಹೂ ಇತ್ಯಾದಿ ವಸ್ತುಗಳನ್ನು ನೀಡಿ ಸಹಕರಿಸಿದರು.
No comments:
Post a Comment