ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ನಮ್ಮ ಶಾಲೆಯ ಅಪೂರ್ವ ಎಡಕಾನ ರಚಿಸಿದ ಕವನ. ಇದಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ .
ಆಟ ಪಾಠ
ಗಂಟೆಯ ಸದ್ದನು ಕೇಳಿದ ಮಕ್ಕಳ
ಕೇಕೆಯು ನೋಡಿ ಮುಗಿಲುದ್ದ
ತರಗತಿಯಿಂದ ಹೊರಗಡೆಗೋಡಲು
ಹೇಳಲು ತೀರದು ಖುಷಿಯುದ್ದ
ಆಟದ ಬಯಲಿನ ಎಲ್ಲಕಡೆ
ವಿವಿಧ ಆಟಗಳು ತುಂಬಿರಲು
ಎದುರಾಳಿಯ ಗುಂಪೌಟಾಗುವುದನು
ಮೈಕಣ್ಣಾಗಿಸಿ ಕಾದಿರಲು
ಆಟಗಳಿಂದ ನಮ್ಮಯ ಮನವು
ಬಹಳ ಮುದವನು ಪಡೆಯುವುದು
ವ್ಯಾಯಾಮವು ಸಹ ಲಭಿಸುವುದರಿಂದ
ರೋಗಗಳನು ಅದು ಹೊಡೆಯುವುದು
ಮಕ್ಕಳ ಪ್ರೀತಿಯ ಸಬ್ಜೆಕ್ಟ್ ಎಂದರೆ
ದೊರೆಯುವ ಉತ್ತರ ಆಟವೆಂದು
ಆಟವ ಪ್ರೀತಿಸುವ ಮಕ್ಕಳ ಉತ್ತರ
ಅಷ್ಟಕ್ಕಷ್ಟೆ ಪಾಠವೆಂದು
ಕೇಳಿರಿ ಮಕ್ಕಳೆ ಆಟ ಮಾತ್ರವಲ್ಲ
ಜೀವನಕೆ ಪಾಠವು ಬಹಳಗತ್ಯ
ಪಾಠದ ಗಮನವ ಬಿಟ್ಟು ಆಟಕೆ
ಗಮನ ಕೊಟ್ಟರೆ ಜೀವನವೋ ನಮ್ಮದುವ್ಯರ್ಥ
ನ್ಯಾಯ ನೀತಿ ಸತ್ಯ ನಿಷ್ಠೆ
ಮುಂತಾದವುಗಳ ಗುರು ಕಲಿಸುವರು
ಆ ವಿಷಯಕೆ ಪೂರಕವಾದ
ಕಥೆಗಳನೂ ಸಹ ತಿಳಿಸುವರು
ಅಂದಿನ ಪಾಠವ ಅಂದೇ ಕಲಿತರೆ
ಮುಂದಿನ ಕ್ಲಾಸಿಗೆ ಹೋಗಲು ಸಾಧ್ಯ
ಗಣಿತದ ಲೆಕ್ಕ ಸಮಾಜ ಶಾಸ್ತ್ರ
ಕನ್ನಡಲ್ಲಿ ಗದ್ಯ ಪದ್ಯ
ಕಲಿತು ಬಾಳಿದರೆ ಮಾತ್ರವೆ ನಾವು
ಉದ್ಯೋಗಗಳಿಗೆ ಹೋಗುವೆವು
ಕಲಿಯದೆ ಸುಮ್ಮನೆ ತಿರುಗಾಡಿದರೆ
ನಂತರ ಬೀದಿಯಲಲೆದಾಡುವುದು
ಆಟವು ಪಾಠವು ಎರಡೂ ಮುಖ್ಯ
ನಮ್ಮಯ ಈ ಜೀವನಕೆ
ಎರಡಕು ಸಮಾನ ಒತ್ತು ದೊರೆಯದಿರೆ
ಬದಲಾಗುದು ಜೀವಾಕ್ಷಣಕೆ
No comments:
Post a Comment