FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, January 10, 2015

Ganithotsava and Metric Mela 2014-15

ನಮ್ಮ ಶಾಲೆಯಲ್ಲಿ Learning Enhancement Programme (LEP) ಯೋಜನೆಯಂತೆ 2014 -15 ನೇ ವರ್ಷದ ಯು.ಪಿ.ವಿಭಾಗದ ಗಣಿತೋತ್ಸವ ಮತ್ತು ಎಲ್.  ಪಿ. ವಿಭಾಗದ ಮೆಟ್ರಿಕ್ ಮೇಳವನ್ನು ದಿನಾಂಕ 8.1.2015 ರಂದು ನಡೆಸಲಾಯಿತು.
ಮಕ್ಕಳ ಪ್ರಾರ್ಥನೆಯೊಂದಿಗೆ  ಕಾರ್ಯಕ್ರಮ ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರು ಶಿಬಿರವನ್ನು ಉದ್ಘಾಟಿಸಿ ನಿತ್ಯಜೀವನದಲ್ಲಿ ಯಶಸ್ಸು ಗಳಿಸಲು ಗಣಿತ ನೈಪುಣ್ಯಗಳನ್ನು ಕರಗತ ಮಾಡಿಕೊಳ್ಳುವುದು ಅನಿವಾರ್ಯವೆಂದು ಈ ಸಂದರ್ಭದಲ್ಲಿ ಹೇಳಿದರು.
ಹಿರಿಯ ಗಣಿತ ಶಿಕ್ಷಕ ಶ್ರೀನಿವಾಸ ಕೆ. ಹೆಚ್ ಅವರು ಜೀವನದ ಎಲ್ಲಾ ಪ್ರಶ್ನೆಗಳಿಗೂ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಗಣಿತದೊಂದಿಗೆ  ಸಂಬಂಧವಿದೆ . ಇಂತಹ ಶಿಬಿರವು ಮಕ್ಕಳ ಪ್ರತಿಭೆಗಳ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ನೀಡುವುದು ಎಂದು ನುಡಿದರು.

ಶಾಲಾ ಅಧ್ಯಾಪಕ ಯನ್. ಮಹಾಲಿಂಗ ಭಟ್ ಅವರು ಶಿಬಿರ ಗೀತೆಯನ್ನು ಮಕ್ಕಳಿಂದ ಹಾಡಿಸಿದರು. ಪ್ರೇಮಲತಾ ಟೀಚರ್ , ಸೌಮ್ಯಶಂಕರಿ ಟೀಚರ್ , ಶ್ರೀನಿವಾಸ ಮಾಸ್ಟರ್ ,ರಾಮಮೋಹನ ಮಾಸ್ಟರ್, ಗಾಯತ್ರಿ ಟೀಚರ್ ಈ ಶಿಬಿರಕ್ಕೆ ನೇತ್ರತ್ವ ನೀಡಿದರು. 

ಮಕ್ಕಳು ಪ್ರಕ್ರತಿ ವೀಕ್ಷಣೆ ಮಾಡಿ ಗಣಿತವನ್ನು ಆಸ್ವಾದಿಸುತ್ತಾ ಹಾಡು,ಒಗಟು ಮೊದಲಾದವುಗಳನ್ನು ರಚಿಸಿದರು.




ಗಣಿತಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲು ಶಾಲೆಯ ಸಮೀಪವಿರುವ  ಶ್ರೀಮತಿ ಜಯಲಕ್ಷ್ಮಿ ಮೇಪೋಡಡ್ಕ ಅವರ ಮನೆಗೆ ಭೇಟಿ ನೀಡಿದರು . ಅವರು  ಹೈನುಗಾರಿಕೆಗೆ ಸಂಬಂಧಪಟ್ಟ ಮಾಹಿತಿ ನೀಡಿದರು.  ಇದಕ್ಕೆ ತಗಲುವ ಖರ್ಚು ವೆಚ್ಚ ಲಾಭ ನಷ್ಟದ ಬಗ್ಗೆ ಅವರು  ವಿವರವಾಗಿ ತಿಳಿಸಿದರು. ಅದಕ್ಕೆ ಅಗತ್ಯವಿರುವ ಪ್ರಶ್ನಾವಳಿಗಳನ್ನು ಮಕ್ಕಳು ಗುಂಪಿನಲ್ಲಿ ಕುಳಿತು ಮೊದಲೇ  ತಯಾರಿಸಿದ್ದರು.

ಅನಂತರ ವಿವಿಧ ಪ್ಯಾಟರ್ನ್, ಪೇಪರ್ ಬ್ಯಾಗ್ ಮತ್ತು ಟ್ಯಾನ್ ಗ್ರಾಂ ಮೊದಲಾದ ನಿರ್ಮಾಣ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು. 



ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಿಗೆ ಮೆಟ್ರಿಕ್ ಅಳತೆಗಳಿಗೆ (ಉದ್ದ, ಅಗಲ, ಭಾರ, ಸಮಯ ಇತ್ಯಾದಿ) ಸಂಬಂಧಿಸಿದ ಆಶಯಗಳು ಕಲಿಕಾ ಸಾಧನೆಗಳು ಲಭಿಸುವಂತೆ ಮಾಡುವ ಪ್ರಧಾನ ಉದ್ದೇಶದಿಂದ ಈ ಮೇಳವನ್ನು ಸಂಘಟಿಸಲಾಯಿತು . ಶಿಬಿರದ ಪೂರ್ವ ಭಾವಿಯಾಗಿ ದಿನಾಂಕ 7.1.2015ರಂದು ನಡೆದ ಕಾರ್ಯಾಗಾರದಲ್ಲಿ ಮೆಟ್ರಿಕ್ ಅಳತೆಗಳಿಗೆ ಸಂಬಂಧಿಸಿದ ಉಪಕರಣಗಳ ಮಾದರಿಗಳನ್ನು ಅಧ್ಯಾಪಕರು, ರಕ್ಷಕರು ಮತ್ತು ಮಕ್ಕಳು  ಒಟ್ಟಾಗಿ ಸೇರಿ ತಯಾರಿಸಿದರು.


ಮಕ್ಕಳು ನಿರ್ದಿಷ್ಟ ಅಳತೆಯಲ್ಲಿ ಬ್ಯಾಡ್ಜ್ ಗಳನ್ನು  ತಯಾರಿಸಿದರು. ಬ್ಯಾಡ್ಜ್ ತಯಾರಿಸಲು ಬೇಕಾದ ಸೂಚನೆಗಳನ್ನೊಳಗೊಂಡ ಕಾಗದವನ್ನು ಎಲ್ಲ ಮಕ್ಕಳಿಗೂ ನೀಡಲಾಯಿತು. ಅದರ ಆಧಾರದಲ್ಲಿ ಬ್ಯಾಡ್ಜ್ ತಯಾರಿಸಿದ ಬಳಿಕ ನಾಲ್ಕು ಬಣ್ಣದ  ಸ್ಕೆಚ್ ಪೆನ್ ಬಳಸಿ ಬ್ಯಾಡ್ಜ್ ನಲ್ಲಿ Star ಗುರುತು ಮಾಡಿ ಮಕ್ಕಳನ್ನು ನಾಲ್ಕು ಗುಂಪುಗಳಾಗಿ ಮಾಡಲಾಯಿತು.  ಅನಂತರ ಆಟದ ನೋಟುಗಳನ್ನು ಬಳಸಿಕೊಂಡು ನಿರ್ದಿಷ್ಟ ಸಂಖ್ಯೆಯ ರೂಪಾಯಿಗಳನ್ನು ಹೆಕ್ಕಿ ತೆಗೆದರು. 

ಅನಂತರ  ಮೆಟ್ರಿಕ್ ಅಳತೆಗಳಾದ ಲೀಟರ್, ಮಿಲ್ಲಿಲೀಟರ್ ,ಕಿಲೋಗ್ರಾಂ, ಗ್ರಾಂ  ಇವುಗಳನ್ನು ಪ್ರಾಯೋಗಿಕವಾಗಿ ಉಪಯೋಗಿಸಲು ಅಂಗಡಿ ಆಟವನ್ನು ನಡೆಸಲಾಯಿತು. ಲೀಟರ್ ಮತ್ತು ಮಿಲ್ಲಿ ಲೀಟರ್ ಪಾತ್ರೆಗಳು , ತಕ್ಕಡಿ (ಸಾಮಾನ್ಯ ತ್ರಾಸು  ಮತ್ತು ಡಿಜಿಟಲ್ ತ್ರಾಸು )ಮತ್ತು ತೂಕದ ಕಲ್ಲುಗಳನ್ನು ಉಪಯೋಗಿಸಿ ಅಂಗಡಿ ಆಟ ಆಡಿದರು. ಮಕ್ಕಳು ಬಹಳ ಉತ್ಸಾಹದಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿ ಗೊಳಿಸಿದರು.


No comments:

Post a Comment