ಮುಖ್ಯೋಪಾಧ್ಯಾಯರ ಸಭೆಯ ಮುಖ್ಯಾಂಶಗಳು :
ಇಂದು ಅಪರಾಹ್ನ ಎರಡು ಘಂಟೆಗೆ ಮಂಜೇಶ್ವರ ಬಿ. ಆರ್. ಸಿ ಯಲ್ಲಿ ಜರಗಿದ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಹಾಗೂ ಮಂಜೇಶ್ವರ ಬಿ.ಪಿ.ಒ ನೀಡಿದ ಮಾಹಿತಿಗಳು.
ಇಂದು ಅಪರಾಹ್ನ ಎರಡು ಘಂಟೆಗೆ ಮಂಜೇಶ್ವರ ಬಿ. ಆರ್. ಸಿ ಯಲ್ಲಿ ಜರಗಿದ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಹಾಗೂ ಮಂಜೇಶ್ವರ ಬಿ.ಪಿ.ಒ ನೀಡಿದ ಮಾಹಿತಿಗಳು.
- ಸೆಪ್ಟಂಬರ್ 20 ರಂದು ನಡೆಯುವ ಕ್ಲಸ್ಟರ್ ತರಬೇತಿಯಲ್ಲಿ ಹಿಂದಿ,ಸಂಸ್ಕ್ರತ,ಉರ್ದು,ಅರೇಬಿಕ್ ಮತ್ತು ಯು.ಪಿ.ಕನ್ನಡ ಭಾಷಾ ಅಧ್ಯಾಪಕರನ್ನು ಬಿಟ್ಟು ಉಳಿದ ಎಲ್ಲಾ ಅಧ್ಯಾಪಕರು ತಪ್ಪದೆ ಹಾಜರಾಗಬೇಕು.
- ಕ್ಲಸ್ಟರ್ ತರಬೇತಿ ಕೇಂದ್ರಗಳು :1 ರಿಂದ 4 ತರಗತಿ ಕನ್ನಡ - GHSS Bangramanjeshwara, ಯು.ಪಿ. ಇಂಗ್ಲೀಶ್, ಸಮಾಜ ವಿಜ್ಞಾನ, ಮೂಲ ವಿಜ್ಞಾನ, ಗಣಿತ (ಕನ್ನಡ ಮಾಧ್ಯಮ)- GHSS Uppala, LP Malayalam Medium - BRC Manjeshwara, UP Malayalam (Core subject) - GUPS Kasaragod
- ಸೆಪ್ಟಂಬರ್ 19 ರಿಂದ 22ರ ವರೆಗೆ ಹೆದ್ದಾರಿ ಎ.ಯು.ಪಿ. ಶಾಲೆ ಬಾಯಾರು ಮುಳಿಗದ್ದೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಶಿಬಿರ. ಪ್ರತಿಯೊಂದು ಶಾಲೆಯಿಂದ ತಲಾ ನಾಲ್ಕು ಸ್ಕೌಟ್ಸ್ ಮತ್ತು ಗೈಡ್ಸ್ ಭಾಗವಹಿಸಬೇಕು.
- ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸ್ಪರ್ಧೆಗಳು ಸೆಪ್ಟಂಬರ್ ಕೊನೆಯ ವಾರದಲ್ಲಿ GHSS Mangalpady ಯಲ್ಲಿ ನಡೆಯಲಿರುವುದು. ಅದರ ಪೂರ್ವಭಾವಿಯಾಗಿ organising committee ಸಭೆಯು ಸೆಪ್ಟಂಬರ್ 18 ರಂದು ಅಪರಾಹ್ನ ಎರಡು ಘಂಟೆಗೆ GHSS Mangalpady ಯಲ್ಲಿ ನಡೆಯಲಿರುವುದು.
- ಸೆಪ್ಟಂಬರ್ 23 ರಂದು ಬಿ. ಅರ್.ಸಿ. ಮಂಜೇಶ್ವರದಲ್ಲಿ ಒಂದು ದಿನದ Work experience workshop ನಡೆಯಲಿರುವುದು. ಪ್ರತೀ ಶಾಲೆಯಿಂದ ಆಸಕ್ತಿಯಿರುವ ಒಬ್ಬರು ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಬೇಕು. (ಕತ್ತರಿ, ಸೂಜಿ ನೂಲು, ಪೇಪರ್ ನೈಫ್ ,ಸ್ಕೇಲ್, ವೇಸ್ಟ್ ಸೋಕ್ಸ್, ವೇಸ್ಟ್ ಬಟ್ಟೆ,ಇತ್ಯಾದಿ ಕೊಂಡುಹೋಗಬೇಕು)
- First Term Evaluation - ಬದಲಾದ ವೇಳಾಪಟ್ಟಿ
- ಸೆಪ್ಟಂಬರ್ ಕೊನೆಯ ವಾರದಲ್ಲಿ ಕ್ಲಾಸ್ ಪಿ.ಟಿ.ಎ. ನಡೆಸಬೇಕು.
- ವಿಜ್ಞಾನ ಸಂಘದ ಆಶ್ರಯದಲ್ಲಿ ಶಾಲಾ ಮಟ್ಟದಲ್ಲಿ ಸೆಪ್ಟಂಬರ್ 25ರಂದು ವಿಜ್ಞಾನ ರಸಪ್ರಶ್ನೆ ನಡೆಸಬೇಕು
- ಶಾಲಾ ಮಟ್ಟದಲ್ಲಿ ದಸರಾ ನಾಡ ಹಬ್ಬ ಆಚರಿಸುವುದು
- ಸಾಕ್ಷರ ಯೋಜನೆಯ ಭಾಗವಾಗಿ ಒಂದು ಶನಿವಾರ ಶಾಲಾ ಮಟ್ಟದ ಶಿಬಿರವನ್ನು ನಡೆಸುವುದು
No comments:
Post a Comment