FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, August 17, 2016

FARMERS DAY CELEBRATION

ಕೃಷಿಕರ ದಿನ- ವಿಚಾರ ಸಂಕಿರಣ 
ಸಿಂಹ ಮಾಸದ ಒಂದನೇ ದಿನವಾದ ಅಗೋಸ್ತು 17 ರಂದು ನಮ್ಮ ಶಾಲೆಯಲ್ಲಿ ಕೃಷಿಕರ ದಿನವಾಗಿ  ಆಚರಿಸಲಾಯಿತು. 
ಇದರ ಭಾಗವಾಗಿ ನಮ್ಮ ಊರಿನ ಸಾಮಾಜಿಕ ಮುಖಂಡ ಹಾಗೂ  ಪ್ರಗತಿಪರ ಕೃಷಿಕ ಶ್ರೀ ಕಕ್ವೆ ಶಂಕರ್ ರಾವ್  ಇವರು ಸಾವಯವ ತರಕಾರಿ ಕೃಷಿಯ ಕುರಿತು ನಮ್ಮ ಶಾಲಾ ಮಕ್ಕಳೊಂದಿಗೆ ವಿಚಾರ ವಿನಿಮಯ ನಡೆಸಿದರು. 
ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಪಿ.ಟಿ.ಎ . ಅಧ್ಯಕ್ಷ ಜಾನ್ ಡಿ ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 
ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ನರೇಶ್ ಮಾಸ್ಟರ್ ವಂದಿಸಿದರು. ರಾಮಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. 
 ಕಾರ್ಯಕ್ರಮದ ಬಳಿಕ ಅವರು ಶಾಲಾ ತರಕಾರಿ ತೋಟಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು. 

 

No comments:

Post a Comment