FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, August 20, 2016

KANNADA BOOKS DISTRIBUTION

 ಕನ್ನಡ ಪುಸ್ತಕಗಳ ವಿತರಣಾ ಸಮಾರಂಭ 

ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಮನವಿಯ  ಮೇರೆಗೆ ಗಡಿನಾಡಿನ ಕನ್ನಡ ಶಾಲೆಗಳ ವಾಚನಾಲಯಕ್ಕೆ ಒದಗಿಸಿದ ಸುಮಾರು 30,000/ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವು ದಿನಾಂಕ 20.08.2016 ರಂದು ಕುಂಬಳೆಯ ಸಿಟಿ ಕಾಲಿನಲ್ಲಿ ಜರಗಿತು. ಕರ್ನಾಟಕ ಸರಕಾರದ ಸನ್ಮಾನ್ಯ ಜವುಳಿ ಮತ್ತು ಮುಜರಾಯಿ ಇಲಾಖಾ ಸಚಿವರಾದ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರು ಪುಸ್ತಕಗಳನ್ನು ವಿತರಿಸಿದರು .  ನಮ್ಮ ಶಾಲೆಗೂ ಈ ಪುಸ್ತಕಗಳು ಲಭಿಸಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಹಾಗು ಜಾನಪದ ಪರಿಷತ್ತು ಕೇರಳ ಘಟಕಕ್ಕೆ ನಮ್ಮ  ಶಾಲಾ ಪರವಾಗಿ ಅಭಿನಂದನೆಗಳು .

No comments:

Post a Comment