ರಕ್ಷಕರ ಸಮ್ಮೇಳನ
ಸರ್ವಶಿಕ್ಷಾ ಅಭಿಯಾನದ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯನ್ನು ಈ ವರ್ಷದ ನವೆಂಬರ್ 14 ರಂದು ರಕ್ಷಕರ ಸಮ್ಮೇಳನವಾಗಿ ಆಚರಿಸಲು ಕೇರಳ ಸರಕಾರ ತೀರ್ಮಾನಿಸಿದ ಪ್ರಕಾರ ನಮ್ಮ ಧರ್ಮತ್ತಡ್ಕ ಎ.ಯು.ಪಿ. ಶಾಲೆಯಲ್ಲೂ ಆಚರಿಸಲಾಯಿತು.
ಸರ್ವಶಿಕ್ಷಾ ಅಭಿಯಾನದ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯನ್ನು ಈ ವರ್ಷದ ನವೆಂಬರ್ 14 ರಂದು ರಕ್ಷಕರ ಸಮ್ಮೇಳನವಾಗಿ ಆಚರಿಸಲು ಕೇರಳ ಸರಕಾರ ತೀರ್ಮಾನಿಸಿದ ಪ್ರಕಾರ ನಮ್ಮ ಧರ್ಮತ್ತಡ್ಕ ಎ.ಯು.ಪಿ. ಶಾಲೆಯಲ್ಲೂ ಆಚರಿಸಲಾಯಿತು.
ನಮ್ಮ
ಶಾಲಾ ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷರಾದ ಶ್ರೀಯುತ ವೆಂಕಟ್ರಾಜ
ನೀರಮೂಲೆಯವರ ಅಧ್ಯಕ್ಷತೆಯಲ್ಲಿ
ವಾರ್ಡ್ ಸದಸ್ಯೆ ಕುಮಾರಿ ವಸಂತಿ
ಯಂ ಅವರು ಸಮ್ಮೇಳನವನ್ನು
ಉದ್ಘಾಟಿಸಿದರು.
ಶಾಲಾ
ವ್ಯವಸ್ಥಾಪಕರಾದ ಶ್ರೀ ಯನ್
ಸುಬ್ಬಣ್ಣ ಭಟ್,ಮಾತೃ
ಮಂಡಳಿಯ ಅದ್ಯಕ್ಷೆ ಶ್ರೀಮತಿ
ಶ್ರೀದೇವಿ ಪೂಕಳ ಅವರು ಶುಭಾಶಂಸನೆ
ಗೈದರು ಆರಂಭದಲ್ಲಿ ಶಾಲಾ
ಮುಖ್ಯೋಪಾಧ್ಯಾಯರಾದ
ಶ್ರೀಯನ್.ಯಚ್.ಲಕ್ಷ್ಮಿನಾರಾಯಣಭಟ್
ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ
ಎಲ್ಲರನ್ನೂ ಸ್ವಾಗತಿಸಿದರು .
ಶಾಲಾ
ಅಧ್ಯಾಪಕರಾದ ಯನ್.
ಶಂಕರನಾರಾಯಣ
ಭಟ್ ಅವರು ಧನ್ಯವಾದ ಸಮರ್ಪಿಸಿದರು
. ಅಧ್ಯಾಪಕ
ಶ್ರೀ ರಾಮಮೋಹನ್ ಸಿ ಯಚ್ ಅವರು
ಕಾರ್ಯಕ್ರಮ ನಿರೂಪಿಸಿದರು .
ಬಳಿಕ
ನಡೆದ ರಕ್ಷಕರ ಜಾಗೃತಿ ಶಿಬಿರದಲ್ಲಿ
ಒಟ್ಟು 133
ಮಂದಿ
ರಕ್ಷಕರು ಭಾಗವಹಿಸಿದ್ದರು .
ಮಕ್ಕಳಲ್ಲಿ
ಮೂಡಬೇಕಾದ ಮೌಲ್ಯಗಳು,ಮನೋಭಾವಗಳು
,ಅಭ್ಯಾಸಗಳು
,ಕಲಿಕಾ
ಬೆಂಬಲ ,ಸೌಹಾರ್ದಯುತ
ಮನೆಯ ವಾತಾವರಣ ,ಭಾವನಾತ್ಮಕ
ಬೆಂಬಲಗಳು ಇತ್ಯಾದಿ ವಿಚಾರಗಳ
ಕುರಿತು ಅಧ್ಯಾಪಕರಾದ ರಾಮಮೋಹನ್
ಸಿ ಯಚ್ ,
ಶಂಕರನಾರಾಯಣ
ಭಟ್,ಪ್ರೇಮಲತಾ
ಯo ಅವರು
ವಿಷಯ ಮಂಡಿಸಿದರು
.
ರಕ್ಷಕರಿಂದಲೂ
ಸಕಾರಾತ್ಮಕ ಅಭಿಪ್ರಾಯಗಳು ಬಂದುವು
. ಮಕ್ಕಳ
ಸರ್ವತೋಮುಖ ಅಭಿವೃದ್ಧಿಗಾಗಿ
ಎಚ್ಹೆತ್ತು ಕಾರ್ಯನಿರ್ವಹಿಸುವುದು
ಅನಿವಾರ್ಯ ಎಂಬ ಒಕ್ಕೊರಲಿನ
ಅಭಿಪ್ರಾಯವು ಸಮ್ಮೇಳನದಿಂದ
ಮೂಡಿಬಂತು ಎಲ್ಲ ರಕ್ಷಕರಿಗೂ ಲಘು
ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು
.
No comments:
Post a Comment