FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, November 6, 2014

KASARAGOD REVENUE DISTRICT BEST BLOG AWARD (IN UP SECTION)

ಉತ್ತಮ ಬ್ಲಾಗ್ ಪ್ರಶಸ್ತಿ :
(BEST BLOG IN KASARAGOD REVENUE DISTRICT)

ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಸಮಿತಿಯ BLEND (Blog For Educational Dynamic Network) ಯೋಜನೆಯಂತೆ ತಯಾರಿಸಲಾದ ಬ್ಲಾಗುಗಳಲ್ಲಿ ಕಾಸರಗೋಡು ಕಂದಾಯ ಜಿಲ್ಲೆಯಲ್ಲಿ ಯು.ಪಿ. ವಿಭಾಗದ ಅತ್ಯುತ್ತಮ ಬ್ಲಾಗ್ ಪ್ರಶಸ್ತಿಯು ನಮ್ಮ ಶಾಲೆಗೆ ಸಿಕ್ಕಿದೆ ಎಂಬುದನ್ನು ತಿಳಿಸಲು  ಸಂತೊಷಪಡುತ್ತೇವೆ. ಇಂದು ಕಾಸರಗೋಡಿನ ಮುನಿಸಿಪಲ್ ಕಾನ್ಫರೆನ್ಸ್ ಹಾಲ್  ನಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಲೋಕಸಭಾ ಸದಸ್ಯ ಶ್ರೀ ಪಿ. ಕರುಣಾಕರನ್ ಇದನ್ನು ಅಧಿಕ್ರತವಾಗಿ ಘೋಷಿಸಿದರು. ಕಾಸರಗೋಡು ಶಾಸಕ ಶ್ರೀ ಎನ್.ಎ. ನೆಲ್ಲಿಕುನ್ನು  ಟ್ರೋಫಿಯನ್ನು ವಿತರಿಸಿದರು . ಯು.ಪಿ. ವಿಭಾಗದಲ್ಲಿ ನಮ್ಮ ಶಾಲೆಯೊಂದಿಗೆ ಜಿ.ಯು.ಪಿ.ಶಾಲೆ ಕರಿಚೇರಿ ಮತ್ತು ಜಿ.ಯು.ಪಿ.ಶಾಲೆ ಆರಯಿ  ಉತ್ತಮ ಬ್ಲಾಗ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದು ನಮಗೆ ಇನ್ನೂ ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ನಿರ್ವಹಿಸಲು ಪ್ರೇರಣೆ ನೀಡಿದಂತಾಗಿದೆ.  ನಮಗೆ ಬ್ಲಾಗ್ ನಿರ್ವಹಣೆಯಲ್ಲಿ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ನೀಡಿದ ಎಲ್ಲರಿಗೂ ನಾವು ಅಭಾರಿಯಾಗಿದ್ದೇವೆ . ಇನ್ನು ಮುಂದೆಯೂ ಎಲ್ಲರ ಸಹಕಾರವನ್ನು ಬಯಸುತ್ತೇವೆ. ನಮ್ಮ ಬ್ಲಾಗನ್ನು ವೀಕ್ಷಿಸಿ ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು  ನೀಡಬೇಕಾಗಿ ವಿನಂತಿಸುತ್ತೇವೆ. 
                        ಇತಿ 
             ಬ್ಲಾಗ್ ಟೀಮ್ 
            ಧರ್ಮತ್ತಡ್ಕ ಎ.ಯು.ಪಿ.ಶಾಲೆ

No comments:

Post a Comment