ಅಫಘಾತಕ್ಕೆ ಈಡಾಗಿ ಅಥವಾ ಬಿದ್ದು ಕೈಗೋ ಕಾಲಿಗೋ ಅಥವಾ ದೇಹದ ಇನ್ಯಾವುದೇ ಬಾಗಕ್ಕೆ ಏಟಾದರೆ ಚಿಕಿತ್ಸೆಗೆ ಮೊದಲು ಎಕ್ಸರೇ ತೆಗೆಯುವಂತೆ ವೈದ್ಯರು ಸಲಹೆ ನೀಡುವುದು ಇಂದು ಸಾಮಾನ್ಯವಾಗಿದೆ ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಎಕ್ಸರೇ ಯನ್ನು ವಿಲಿಯಂ ಕೊನಾರ್ಡ್ ರೋಂಟ್ ಜನ್ ಎಂಬವರು 1895 ನವೆಂಬರ್ 8 ರಂದು ಆವಿಷ್ಕರಿಸಿದರು . ಇದು ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಈ ದಿನವನ್ನು ಎಕ್ಸರೇ ದಿನ ಎಂದು ಆಚರಿಸಲಾಗುತ್ತಿದೆ . 2011 ರಿಂದ ಈ ದಿನವನ್ನು ಅಂತರಾಷ್ಟ್ರೀಯ ರೇಡಿಯಾಲಜಿ ದಿನ ಎಂದು ಆಚರಿಸಲಾಗುತ್ತಿದೆ.
No comments:
Post a Comment