ಶಾಲಾ ಮಟ್ಟದ ಕವಿತಾ ರಚನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿತೆ :
ಹೊಳೆ
ಬೆಟ್ಟ ಗುಡ್ಡಗಳ ಎಡೆಯಲಿ ಹುಟ್ಟುತ
ಬಳುಕುತ ಕುಲುಕುತ ಹರಿಯುವೆನು
ಹತ್ತು ಮಂದಿಯ ದಾಹವ ತೀರಿಸಿ
ಮುಂದಕೆ ಮುಂದಕೆ ಹೋಗುವೆನು
ಬಟ್ಟೆಯ ಒಗೆಯಲು ನೀರನು ಕುಡಿಯಲು
ಬಳಸುವ ನೀರೇ ನನ್ನಿಂದ
ನೀರನು ಪಡೆದು ಸಂತಸದಲ್ಲಿ
ಹೋಲಿಕೆ ನಡೆಸುವರು ಹೊನ್ನಿಂದ
ಹಳ್ಳ ಕೊಳಗಳು ಸೇರುವ ಕ್ಷಣದಲಿ
ಆಗುವೆ ನಾನು ಬಲುದೊಡ್ಡ
ಆಗಲೆ ಮಾನವ ಮಾಡುವನು
ಕಲ್ಲನು ಕಟ್ಟಿ ನನಗಡ್ಡ
ಬೆಟ್ಟದ ಮೇಲಿಂದ ಕೆಳಗಿಳಿದಾಗ
ಮೂಡುವುದೊಂದು ಜಲಪಾತ
ಅಂದು ನಾನು ಆಗಿದ್ದೆ ಜನರ
ಜೀವನದಲ್ಲಿ ಹಿರಿಪಾತ್ರ
ಯಾವ ಕಾರಣದ ಪಾಪವು ಎಂದು
ಮಾಡುತಿರುವರು ನನ್ನ ನಾಶ
ನೆನಪಿರಲಿ ಇದು ನನ್ನದು ಮಾತ್ರವಲ್ಲ
ಜನರಿಗೂ ಸಹ ಯಮಪಾಶ
- ಅಪೂರ್ವ ಎಡಕ್ಕಾನ
VII C ತರಗತಿ
ಎರಡನೆ ಬಹುಮಾನ ಪಡೆದ ಕವಿತೆಯನ್ನು Childrens corner ನಲ್ಲಿ ನೋಡಿರಿ
ಹೊಳೆ
ಬೆಟ್ಟ ಗುಡ್ಡಗಳ ಎಡೆಯಲಿ ಹುಟ್ಟುತ
ಬಳುಕುತ ಕುಲುಕುತ ಹರಿಯುವೆನು
ಹತ್ತು ಮಂದಿಯ ದಾಹವ ತೀರಿಸಿ
ಮುಂದಕೆ ಮುಂದಕೆ ಹೋಗುವೆನು
ಬಟ್ಟೆಯ ಒಗೆಯಲು ನೀರನು ಕುಡಿಯಲು
ಬಳಸುವ ನೀರೇ ನನ್ನಿಂದ
ನೀರನು ಪಡೆದು ಸಂತಸದಲ್ಲಿ
ಹೋಲಿಕೆ ನಡೆಸುವರು ಹೊನ್ನಿಂದ
ಹಳ್ಳ ಕೊಳಗಳು ಸೇರುವ ಕ್ಷಣದಲಿ
ಆಗುವೆ ನಾನು ಬಲುದೊಡ್ಡ
ಆಗಲೆ ಮಾನವ ಮಾಡುವನು
ಕಲ್ಲನು ಕಟ್ಟಿ ನನಗಡ್ಡ
ಬೆಟ್ಟದ ಮೇಲಿಂದ ಕೆಳಗಿಳಿದಾಗ
ಮೂಡುವುದೊಂದು ಜಲಪಾತ
ಅಂದು ನಾನು ಆಗಿದ್ದೆ ಜನರ
ಜೀವನದಲ್ಲಿ ಹಿರಿಪಾತ್ರ
ಯಾವ ಕಾರಣದ ಪಾಪವು ಎಂದು
ಮಾಡುತಿರುವರು ನನ್ನ ನಾಶ
ನೆನಪಿರಲಿ ಇದು ನನ್ನದು ಮಾತ್ರವಲ್ಲ
ಜನರಿಗೂ ಸಹ ಯಮಪಾಶ
- ಅಪೂರ್ವ ಎಡಕ್ಕಾನ
VII C ತರಗತಿ
ಎರಡನೆ ಬಹುಮಾನ ಪಡೆದ ಕವಿತೆಯನ್ನು Childrens corner ನಲ್ಲಿ ನೋಡಿರಿ
No comments:
Post a Comment