FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 31, 2014

Rashtreeya Ekata Divas

ಇಂದು ರಾಷ್ಟ್ರೀಯ ಏಕತಾ ದಿನ (ಅಕ್ಟೋಬರ್ 31):
ಭಾರತದ ಸ್ವಾತಂತ್ರ್ಯ ಹೋರಾಟಗಾರ ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವಾದ ಇಂದು (ಅಕ್ಟೋಬರ್ 31)  ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುವುದು. ಇವರು 1875 October 31 ರಂದು ಗುಜರಾತಿನ ಕರಮಸಾದ್ ಎಂಬಲ್ಲಿ ಜನಿಸಿದರು  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಂತ್ರ ಭಾರತದ ಪ್ರಥಮ ಗ್ರಹ ಮಂತ್ರಿಯಾಗಿಯೂ , ಪ್ರಥಮ ಉಪ ಪ್ರಧಾನಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರನ್ನು ಭಾರತದ ಉಕ್ಕಿನ ಮನುಷ್ಯ ಅಥವಾ ಬಿಸ್ಮಾರ್ಕ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಅವರ ದೇಶ ಸೇವೆಯನ್ನು ಮನಗಂಡು ಈ ವರ್ಷದಿಂದ ಅವರ ಜನ್ಮ ದಿನವನ್ನು ರಾಷ್ಟೀಯ ಏಕತಾ ದಿನವಾಗಿ ಆಚರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ . 
ಇಂದು ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ಚರಮ ದಿನವಾಗಿಯೂ ಆಚರಿಸುತ್ತಾರೆ . 1984 October 31 ರಂದು ಪ್ರಧಾನ ಮಂತ್ರಿ ಹುದ್ದೆಯಲ್ಲಿರುವಾಗಲೇ ಅವರ ಅಂಗರಕ್ಷಕರಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್  ಅವರನ್ನು ಗುಂಡು ಹಾರಿಸಿ ಕೊಲೆಮಾಡಿದರು . ಅವರ ಸಮಾಧಿಯು ಇಂದು ಶಕ್ತಿ ಸ್ಥಳ  ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ 

No comments:

Post a Comment