ಶಾರದಾ ಪೂಜೆ :
ನಮ್ಮ ಶಾಲೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 3.10.2014 ರಂದು ಶ್ರೀ ಶಾರದಾ ಪೂಜೆಯನ್ನು ನಡೆಸಲಾಯಿತು. ಎಲ್ಲಾ ಮಕ್ಕಳೂ ತಮ್ಮ ಪುಸ್ತಕಗಳನ್ನಿಟ್ಟು ಭಕ್ತಿ ಭಾವದಿಂದ ವಿದ್ಯಾಧಿದೇವತೆಯಾದ ಮಾತೆ ಸರಸ್ವತಿಯನ್ನು ಪೂಜಿಸಿದರು. ಶಾಲಾ ಪಿ.ಟಿ. ಎ. ಸದಸ್ಯ ಶಿವಪ್ರಸಾದ್ ನೆರಿಯ ಪೂಜೆಯನ್ನು ನಡೆಸಿಕೊಟ್ಟರು. ಎಲ್ಲ ಮಕ್ಕಳಿಗೂ ಅವಲಕ್ಕಿ ಪ್ರಸಾದವನ್ನು ವಿತರಿಸಲಾಯಿತು. ಶಾಲಾ ಪ್ರಬಂಧಕರು ಅಕ್ಷರಾಭ್ಯಾಸ ಮಾಡಿಸಿದರು. ಮುಖ್ಯೋಪಾಧ್ಯಾಯರು ದಿನದ ಮಹತ್ವದ ಬಗ್ಗೆ ಮಾತನಾಡಿದರು.

ಅಭಿನಂದನೆ. ಮುಂದಿನಬಾರಿ ಇನ್ನಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕನ್ನಡದ ನಾಡಹಬ್ಬ ದಸರಾ ಆಚರಿಸಬೇಕಾಗಿ ವಿನಂತಿ
ReplyDelete